ಬುಧವಾರ, ಏಪ್ರಿಲ್ 26, 2017

ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮಅಂಕಿತ ನಾಮನಿಜಗುಣೇಶ್ವರಲಿಂಗ 
ಕಾಲ೧೧೬೦ 
ದೊರಕಿರುವ ವಚನಗಳು1 (ಆಧಾರಸಮಗ್ರ ವಚನ ಸಂಪುಟ) 
ತಂದೆ/ತಾಯಿ
ಹುಟ್ಟಿದ ಸ್ಥಳ
ಪರಿಚಯಕಾಲ ಸು. 1160.  
ಚೋಳಮಂಡಲದ ಕಾಂಚಿ ನಗರದ ಎಡೆಮಠದ ನಾಗಿದೇವನ ಹೆಂಡತಿಈಕೆಯ 1 ವಚನ ದೊರೆತಿದೆ.

ಸೋಮವಾರ, ಏಪ್ರಿಲ್ 24, 2017

ಪ್ರೀತಿ-ಪ್ರೇಮ

ಹೃದಯ ಬೇನೆಯ ಮತ್ತೊಂದು ಹೆಸರು

ಪ್ರಣಯಕ್ಕೆ ಮೊದಲ ಹೆಜ್ಜೆ
ಚಿಗುರುವ ಮೀಸೆಯ ವಯಸ್ಸಿನಲ್ಲಿ ಚಿಗುರುವ ಭಾವ
ಇದು ತುರಿಕೆ ಇದ್ದಂತೆ. ತುರಿಸಿಕೊಳ್ಳುವಾಗ ಸುಖವೋ ಸುಖ, ಆಮೇಲೆ ಉರಿ ಉರಿ
ಹೃದಯದಿಂದ ಆರಂಭವಾಗಿ ಮೆದುಳನ್ನೇ ಖಾಲಿ ಮಾಡುವ ಬೇನೆ
ಮೊಬೈಲ್ ಕಂಪೆನಿಗಳ ಲಾಭಮೂಲ
ಇದು ವೇದಾಂತಿಗಳ ಬ್ರಹ್ಮ ಇದ್ದಂತೆ ಅನಿರ್ವಚನೀಯ ಮತ್ತು ಅನುಭವ ಮಾತ್ರ ವೇದ್ಯ
ಪ್ರೇಮಿ ಜಗತ್ತಿಗೆ ಹೆದರಲಾರ, ಅವನ ಗತ್ತು ಮತ್ತು ಜಗತ್ತು ಎರಡೂ ಬೇರೆ
ಕಣ್ಣಿಂದ ಆರಂಭವಾಗುವ ಸೋಂಕು, ಅವನ ರೋಗವಿದು. 'ಮದ್ರಾಸ್ ' ಇದ್ದಂತೆ
ಪ್ರೇಮಿಗಳನ್ನು ದ್ವೇಷಿಸುವವರೆಲ್ಲ ಆರೇಂಜ್ಡ್ ಮ್ಯಾರೇಜ್ ಆದವರು
ಪ್ರೇಮಕ್ಕೆ ಜಿಂದಾಬಾದ್ ಎನ್ನುವವರು ಬದುಕು ಬರ್ಬಾದ್ ಆಗದಂತೆಯೂ ಎಚ್ಚರವಹಿಸಬೇಕಾಗುತ್ತೆ
ಪ್ರೀತಿಗೆ ಕಣ್ಣಿಲ್ಲ. ಹಾಗಾಗೇ ಪ್ರೀತಿಸಿದವರಿಗೆ ಬೇರೇನೂ ಕಾಣಿಸುವುದಿಲ್ಲ
ಪ್ರೇಮಿಗಳಿಗೆ ಸಮಾಜ ಕೊಡುವ ಶಿಕ್ಷೆಗೆ 'ಗಲ್ಲು ಶಿಕ್ಷೆ' ಎನ್ನುಬಹುದು
ಒಬ್ಬರಿಗೊಬ್ಬರು ಪರಸ್ಪರ ಕೋಳ ತೊಡಿಸಿಕೊಳ್ಳುವ ಪ್ರಕ್ರಿಯೆ
ನೋಡಿ ತಿಳಿ, ಮಾಡಿ ಕಲಿ ಎಂಬ ನಿಯಮ ಇದಕ್ಕೆ ಅನ್ವಯಿಸದು. ನೋಡಿ ತಿಳಿದವ ಮಾಡಲು ಹೋಗುವುದಿಲ್ಲ
ಇದನ್ನು ಗೆಲ್ಲುವುದೆಂದರೆ ಅದಕ್ಕೆ ಸೋಲುವುದೇ
-ವಿಶ್ವನಾಥ ಸುಂಕಸಾಳ

ಶನಿವಾರ, ಏಪ್ರಿಲ್ 22, 2017

ಪಿತೃ ದೇವೋಭವ...

ಜನ್ಮನೀಡಿದ ತಂದೆ, ತಾಯಿಯ ಋಣವನ್ನ ತೀರಿಸೋದಕ್ಕೆ ಆಗದೇ ಇರ್ ವಿಷಯ. ೮ನೇ ಜನವರಿಯಂದು ನಮ್ಮನ್ನಗಲಿದ ನಮ್ಮ ತಂದೆಯವರಿಗೆ ನಾನು ಇಲ್ಲಿ ಕೇವಲ ನನ್ನ ನಮನವನ್ನ ಸಲ್ಲಿಸುತ್ತಿದ್ದೇನೆ.

ಹುಟ್ಟಿದಾಗಿನಿಂದಲೂ ಕೈ ಹಿಡಿದು,
ಗುಟುಕು ನೀಡಿ ನಮ್ಮ ಬೆಳೆಸಿದ
ಕೈಗಳು ಇಂದು ಕೇವಲ ಒಂದು ಹಿಡಿ ಭಸ್ಮ...

ಪುಟ್ಟ ಹೆಜ್ಜೆಗಳನಿಟ್ಟು ನಡೆವಾಗ
ಬಿದ್ದು ಅತ್ತಾಗ ಎತ್ತಿಹಿಡಿದು ಮುದ್ದಾಡಿದ
ಕೈಗಳು ಇಂದು ಕೇವಲ ಅರೆ ಬೆಂದ ಮೂಳೆ ಮಾತ್ರ...

ಅಂದು ನಮಗೆ ಮಾತಕಲಿಸಿದ
ತೊದಲು ನುಡಿಯ ಕೇಳಿ ಆನಂದಿಸಿದ
ಮಹಾನ್ ತೇಜ ಇಂದು ಕೇವಲ ನೆನಪು ಮಾತ್ರ...

ತುತ್ತು ಕೂಳಿಗೋಸ್ಕರ ಸಾಲ ಮಾಡಿ
ಭವಿಷ್ಯದ ಕನಸ ಹೆಣೆದು ಕೈ ಹಿಡಿದು
ಜೊತೆಗೂಡಿ ನಡೆಸಿದ ಕ್ಷಣಗಳು ಇಂದು ಕೇವಲ ಸ್ಮರಣಿಕೆ...

ಬಾಳಪಯಣದಿ ಸಾಗುತಿದ್ದ ನೌಕೆಗೆ
ಇಂದು ನಾವಿಕನಿಲ್ಲ, ದಿಕ್ಕು ತಪ್ಪದೇ
ಪಯಣವ ಸಾಗಿಸುತ್ತಿದ್ದ ದಿಕ್ಸೂಚಿ ಇಲ್ಲ...

ದಾರಿಕಾಣದೇ ಮುಂದೇನೆಂದು
ಯೋಚಿಸುತ್ತಾ ನಿಂತಿರುವಾಗ ಸರಿಯಾದ
ಮಾರ್ಗವ ತೋರಿದ ಮಾರ್ಗದರ್ಶಿಯು ಇಂದಿಲ್ಲ...

ಆಗಸದಿ ಮೂಡಿದ್ದ ರವಿಯ ಕಿರಣದ
ತೇಜ ಇಂದು ಕಾಣುತ್ತಿಲ್ಲ,
ಎಲ್ಲೇಲ್ಲೂ ಕತ್ತಲು, ಕಗ್ಗತ್ತಲು...

ತುಂಬಿದ ಮನೆಯಲ್ಲಿ ನೆಲೆಸಿದ್ದ
ಕಲರವದ ಸದ್ದು, ಇಂದು
ಅಡಗಿ ಬರೀ ಮೌನ ತುಂಬಿದ ವಾತಾವರಣ...

ಕುಟುಂಬದೆಲ್ಲೆಡೆ ಸೂತಕದ ಛಾಯೆ,
ಮನೆಯ ಪ್ರತಿ ಹೆಜ್ಜೆಯಲ್ಲೂ
ನಿಮ್ಮದೇ ನೆನಪಿನ ಹೊದಿಕೆ...

ದುಃಖ ತುಂಬಿರುವ ಮನಕೆ ನಿಮ್ಮ
ಮಾತನು ಕೇಳುವ ತವಕ, ಕಣ್ಣೀರಿನಲಿ ಮುಳುಗಿರುವ
ಕಣ್ಣುಗಳಿಗೆ ನಿಮ್ಮ ನೋಡುವ ಕಾತರ...

ದೇಹ ನಾಶವಾದರೇನು ಆತ್ಮವೊಂದಿರಲು,
ಜೊತೆಯಿದ್ದು ದಾರಿ ತೋರಿಸಿ ತಂದೆ
ನಮ್ಮ ಮನ, ಮನೆಯಲ್ಲಿ ಶಾಂತಿ ನೆಲೆಸಿರಲು...
                                                                                                     Posted by Prashanth Urala. G

ಗುರುವಾರ, ಏಪ್ರಿಲ್ 20, 2017

ಬಾ ಬಾ ಚಂದು ಮಾಮಬಾ ಬಾ ಚಂದು ಮಾಮ
ಮುತ್ತು ಕೊಡು ಬಾ

ಕಬ್ಬು ಹೆಚ್ಚಿ ತಿರುಳೇ ಕೊಡುವೆ
ಮಾವು ಹೆಚ್ಚಿ ವಾಟೀ ಕೊಡುವೆ
ಬಾಬಾ ಚಂದು ಮಾಮ
ತಿಂಡಿ ತಿನ್ನು ಬಾ

ಕೌಲಿ ಹಾಲು ಕರೆಯಿಸಿ ಕೊಡುವೆ
ಹಾಲು ಕುಡಿಯಲು ಬಟ್ಟಲು ಕೊಡುವೆ
ಬಾ ಬಾ ಚಂದು ಮಾಮ
ಹಾಲು ಕುಡಿ ಬಾ

ತುಪ್ಪದ ದೀಪ ಹಚ್ಚಿ ಇಡುವೆ
ಪುಟ್ಟ ಪುಸ್ತಕ ಓದಲು ಕೊಡುವೆ
ಬಾ ಬಾ ಚಂದು ಮಾಮ
ಪಾಠ ಓದು ಬಾ

ಆಟದ ಸಾಮಾನೆಲ್ಲಾ ಕೊಡುವೆ
ನಿನ್ನ ಸಂಗಡ ಆಡುತಲಿರುವೆ
ಬಾಬಾ ಚಂದು ಮಾಮ ಬಾ
ಕೂಡಿ ಆಡು ಬಾ

-ಹೊಯಿಸಳ