ಬೇಕಾಗುವ ಸಾಮಗ್ರಿಗಳು
- ಅಕ್ಕಿ1ಪಾವು
- ತೆಂಗಿನಕಾಯಿ 1(ಅಥವಾ 1ಟಿನ್ coconut cream)
- ಮೆಣಸಿನಪುಡಿ 2ಚಮಚ
- ಗೋಡಂಬಿ 100ಗ್ರಾಂ
- ಒಣದ್ರಾಕ್ಷಿ 100ಗ್ರಾಂ
- ಉಪ್ಪು 1-2 ಚಮಚ
- ತುಪ್ಪ 2ಚಮಚ
- ಒಗ್ಗರಣೆಗೆ-ಎಣ್ಣೆ 40ಗ್ರಾಂ,
- ಅರಿಶಿನ 1ಚಿಟಿಕೆ,
- ಇಂಗು 1ಚಿಟಿಕೆ,
- ಸಾಸಿವೆ 1ಚಮಚ,
- ಕರಿಬೇವು 2ಎಳಸು
- ಕೊತ್ತಂಬರಿ ಸೊಪ್ಪು 1ಕಂತೆ
ಅಕ್ಕಿಯನ್ನು ತೊಳೆದು ಉದುರುದುರಾಗಿ (ತುಪ್ಪ ಬೆರೆಸಿ) ಅನ್ನ ಮಾಡಿಕೊಳ್ಳಿ, ತಣ್ಣಗಾಗಲು ಬಿಡಿ ತೆಂಗಿನ ಕಾಯನ್ನು ತುರಿದು ರುಬ್ಬಿ ಹಾಲನ್ನು ತೆಗೆದುಕೊಳ್ಳಿ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಒಗ್ಗರಣೆ ಮಾಡಿಕೊಳ್ಳಿ ನಂತರ ಅದಕ್ಕೆ ಗೋಡಂಬಿ ದ್ರಾಕ್ಷಿ ಹಾಲು ಹಾಕಿ ಎರಡು ನಿಮಿಷ ಕುದಿಸಿ ಅನ್ನವನ್ನು ಬಾಣಲೆಗೆ ಹಾಕಿ,ಮೆಣಸಿನಪುಡಿ ಬೆರೆಸಿ, ಮೊಗಚುವ ಕೈಯಿಂದ ಐದು ನಿಮಿಷ ಬಾಡಿಸಿ ಒಲೆ ಆರಿಸಿ ಮುಚ್ಚಿಡಿ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸಿಂಪಡಿಸಿ ಉಣಬಡಿಸಿ.