fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಜುಲೈ 26, 2017

ಏಕಾಂತರಾಮಿತಂದೆ

ಅಂಕಿತ ನಾಮಎನ್ನಯ್ಯ ಚೆನ್ನರಾಮ 

ಕಾಲ೧೧೬೦ 
ದೊರಕಿರುವ ವಚನಗಳು7 (ಆಧಾರಸಮಗ್ರ ವಚನ ಸಂಪುಟ) 
ತಂದೆ/ತಾಯಿಪುರುಷೋತ್ತಮಭಟ್ಟಸೀತಮ್ಮ 
ಹುಟ್ಟಿದ ಸ್ಥಳಕಲ್ಬುರ್ಗಿ ಜಿಲ್ಲೆಯ ಅಳಂದ 
ಪರಿಚಯಕಾಲ ಸು. 1160. 

ಸ್ಥಳಕಲ್ಬುರ್ಗಿ ಜಿಲ್ಲೆಯ ಅಳಂದಹರಿಹರ ಈತನ ಬಗ್ಗೆ ರಗಳೆಯೊಂದನ್ನು ಬರೆದಿದ್ದಾನೆಅಬ್ಬಲೂರು ಶಾಸನದಲ್ಲಿ ಇವನ ಉಲ್ಲೇಖವಿದೆತಂದೆಪುರುಷೋತ್ತಮಭಟ್ಟತಾಯಿಸೀತಮ್ಮಪುಲಿಗೆರೆಯ ಸೋಮೇಶ್ವರನು ಈತನ ಕನಸಿನಲ್ಲಿ ಬಂದು ಪರಧರ್ಮಗಳನ್ನು ಜಯಿಸುವಂತೆ ಹೇಳಿದಹಾಗಾಗಿ ಇವನು ಅಬ್ಬಲೂರಿಗೆ ಬಂದು ಅಲ್ಲಿನ ಜೈನರೊಡನೆ ವಾದಮಾಡಿ ಅಲ್ಲಿನ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ತಲೆ ಕತ್ತರಿಸಿಕೊಂಡು ಮತ್ತೆ ದೇವರು ಅವನನ್ನು ಬದುಕಿಸಿದ ಪವಾಡ ನಡೆಯಿತುಬಸದಿಯಲ್ಲಿ ಸೋಮೇಶ್ವರಲಿಂಗ ಸ್ಥಾಪನೆ ಮಾಡಿದ ಎಂಬ ಕಥೆ ಶಾಸನದಲ್ಲಿ ಇದೆಈತನ ಪವಾಡವನ್ನು ಚಿತ್ರಿಸುವ ಶಿಲ್ಪಗಳು ಅಲ್ಲಿನ ದೇವಸ್ಥಾನದಲ್ಲಿವೆಇವನ 7 ವಚನಗಳು ದೊರೆತಿವೆಕಾಯ-ಜೀವ ಭೇದನಿತ್ಯಮುಕ್ತನ ಸ್ಥಿತಿಗಳನ್ನು ವರ್ಣಿಸಿದ್ದಾನೆ.


ಅಶನ ವ್ಯಸನ ಸರ್ವವಿಷಯಾದಿಗಳಲ್ಲಿ ಹುಸಿದು,
ಪಿಸುಣತ್ವದಿಂದ ಗಸಣಿಗೊಂಡು,
ಮಾಡಿಸಿಕೊಂಬುದು ಸದ್ಗುರುವಿಗೆ ಸಂಬಂಧವಲ್ಲ.
ತಿಲರಸ-ವಾರಿಯ ಭೇದದಂತೆಮಣಿಯೊಳಗಿದ್ದ ಸೂತ್ರದಂತೆ
ಅಂಗವ ತೀರ್ಚಿ ಪಾಯ್ಧು ನಿಂದ ಅಹಿಯ ಅಂಗದಂತೆ
ಗುರುಸ್ಥಲಸಂಬಂಧ,
ಎನ್ನಯ್ಯ ಚೆನ್ನರಾಮೇಶ್ವರಲಿಂಗವನರಿಯಬಲ್ಲಡೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು