fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಇಂಟರ್ನೆಟ್ ಗೆ ಸಂಬಂಧಿಸಿದ ಗಾದೆಮಾತುಗಳು


ಹೊಟ್ಟೆಗೆ ಹಿಟ್ಟಿಲ್ಲ, ಮೊಬೈಲ್ಗೆ ನೆಟ್ ಪ್ಯಾಕ್ ಅಂತೆ...... 

  • (ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆಯಂತೆ)


  • ಟಾಕ್ ಟೈಮ್ ಬೆಳ್ಳಿಡಾಟಾ ಬಂಗಾರ.......

  • (ಮಾತು ಬೆಳ್ಳಿ, ಮೌನ ಬಂಗಾರ)


  • ಮಾತು ಬೆಳ್ಳಿ SMS ಬಂಗಾರ.....
    (ಮಾತು ಬೆಳ್ಳಿ, ಮೌನ ಬಂಗಾರ)

    ಕುಳಿತು ಬ್ರೌಸ್ ಮಾಡಿದರೆ GB ಡಾಟಾ ಸಾಲದು...... 
    (ಕೂತು ಉಂಡರೆ ಕುಡಿಕೆ ಹೊನ್ನು ಸಾಲದು)

    ಕುಳಿತು ಬ್ರೌಸ್ ಮಾಡಿದರೆ  ಜಿಯೋ ಸಿಮ್ ಕೂಡ ಸಾಲದು......
    (ಕೂತು ಉಂಡರೆ ಕುಡಿಕೆ ಹೊನ್ನು ಸಾಲದು)

    2 G ಗೆ ವರುಷ 4 G ಗೆ ನಿಮಿಷ..... 
    (ಕುಂಬಾರನಿಗೆ ವರುಷ, ದೊನ್ನೆಗೆ ನಿಮಿಷ)

    ಡಾಟಾ ಇದ್ದಷ್ಟೇ ಬ್ರೌಸ್ ಮಾಡು..... 
    (ಹಾಸಿಗೆ ಇದ್ದಷ್ಟು ಕಾಲು ಚಾಚು)

    2 G ಕೊಟ್ರೆ ಅತ್ತೆ ಕಡೆ, 4 G ಕೊಟ್ರೆ ಸೊಸೆ ಕಡೆ... 
    (3 ಕೊಟ್ರೆ ಅತ್ತೆ ಕಡೆ, 6ಕೊಟ್ರೆ ಸೊಸೆ ಕಡೆ)

    ಮೊಬೈಲ್ ಕಳ್ಳ ಅಂದ್ರೆ ಜೇಬ್ ಮುಟ್ಟಿ ನೋಡಿಕೊಂಡನಂತೆ... 
    (ಕುಂಬಳಕಾಯಿ ಕಳ್ಳ ಅಂದ್ರೆ, ಹೆಗಲ ಮುಟ್ಟಿ ನೊಡಿಕೊಂಡನಂತೆ)

    G ಮೇಲ್-ಗೆ ಬಂದವಳು, ಪೇಸ್-ಬುಕ್ಕ್ ಗೆ ಬರಲ್ವಾ....?
    (ಊರಿಗೆ ಬಂದವಳು, ನೀರಿಗೆ ಬರಲ್ವಾ ?)

    ಗಂಡ ಹೆಂಡತಿ ಜಗಳ ವೈಪೈ ಕನೆಕ್ಟ್ ಆಗೋ ತನಕ....
    (ಗಂಡ ಹೆಂಡತಿ ಜಗಳ ಊಂಡು ಮಲಗುವ ತನಕ)

    ಹುಡುಗಿಯರಿಗೆ ಮೇಕಪ್ ಚಿಂತೆ, ಹುಡುಗರಿಗೆ ಜಿಯೋ ಸಿಮ್ ಚಿಂತೆ....
    (ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಮಿಂಡನ ಚಿಂತೆ) 

    ಮಾತು ಮನೆ ಕೆಡಿಸಿತು SMS ತಲೆ ಕೆಡಿಸಿತು.... 
    (ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು)

    ಮಾತು ಮನೆ ಕೆಡಿಸಿತು ಪೇಸ್-ಬುಕ್ ತಲೆ ಕೆಡಿಸಿತು...
    (ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು)

    ಇಂಟರ್ ನೇಟ್ ಇಲ್ಲದವನಿಗೇ ಕೂತಲ್ಲೇ ನಿದ್ದೆ.... 
    (ಚಿಂತೆ ಇಲ್ಲದವನಿಗೆ, ಸಂತೆಲೂ ನಿದ್ದೆ)

    ಪಾಪಿ ಟವರ್ ಹತ್ತಿದ್ರೂ ಚೋಟುದ್ದ ನೆಟ್‍ವರ್ಕ್....
    (ಪಾಪಿ ಸಮುದ್ರ ಹೊಕ್ಕರೂ, ಮೊಳಕಾಲುತನಕ ನೀರಂತೆ)

    Call ಮಾಡುವವನು ಕುರಿ, SMS ಮಾಡುವವನು ನರಿ.....
    (ಕೊಟ್ಟವನು ಕೊಡಂಗಿ, ಇಸಗೊಂಡವನು ಈರಭದ್ರ)

    ಡಾಟಾ ಖಾಲಿಯಾದರೆ ಚಾಟಿಂಗ್ ನಿಂತಿತೆ....?
    4 Gಯಲ್ಲಿ ಡೌನ್-ಲೋಡ್ ಆಗದ್ದು, 2 G ಲಿ ಆದಿತೇ...? 
    (ಗಿಡವಾಗಿ ಬಗ್ಗದ್ದು, ಮರವಾದಾಗ ಬಗ್ಗಿತೇ...)

    ಬೇರೆಯವರ ವೈಪೈದಲ್ಲಿ ಆ್ಯಪ್ ಅಪ್-ಡೇಟ್ ಮಾಡುವವನೇ ಜಾಣ...
    (ಹುಚ್ಚನ ಮದುವೆಯಲ್ಲಿ, ಉಂಡವನೇ ಜಾಣ....)

    2 G ಗೆ ಹೋದ ಮಾನ, 4 G ಹಾಕಿಸಿದರೂ ಬಾರದು...
    ಕಿಲೋಬೈಟ್(KB) ಗೆ ಹೋದ ಮಾನ, ಟೆರಾ ಬೈಟ್(TB) ಕೊಟ್ಟರು ಬಾರದು....
    SMS ನಲ್ಲಿ ಹೋದ ಮಾನ, Call ಮಾಡಿದ್ರೂ ಬರೊಲ್ಲ...
    (ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೂ ಬಾರದು...)


    ಕಾಮೆಂಟ್‌ಗಳಿಲ್ಲ:

    ಕಾಮೆಂಟ್‌‌ ಪೋಸ್ಟ್‌ ಮಾಡಿ

    ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

    1.. ಜಾಹೀರಾತು

    2.ಜಾಹೀರಾತು

    ಪದ ಪುಸ್ತಕ

    ಹುಡುಕಾಟ ಫಲಿತಾಂಶಗಳು

    ಕನ್ನಡದ ತಾಣ ಅನುಸರಿಸುವವರು