fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶುಕ್ರವಾರ, ಆಗಸ್ಟ್ 19, 2016

ರಿಯೋ ಒಲಿಂಪಿಕ್ಸ್ ಸಾಕ್ಷಿ ಮಲಿಕ್ (೨೦೧೬)ನಲ್ಲಿ ಕಂಚಿನ ಪದಕ 18.08.2016 (MALIK Sakshi win Rio Olympics BRONZE MEDAL )


ರಿಯೋ ಡೀ ಜನೈರೋ (ಆಗಸ್ಟ್ 18,2016): ಒಂದೂಕಾಲು ಶತಕೋಟಿ ಜನರಿರುವ ಭಾರತಕ್ಕೆ ಬಾರಿಯ ಒಲಿಂಪಿಕ್ಸ್'ನಲ್ಲಿ ಕಡೆಗೂ ಪದಕ ಲಭಿಸಿತು.
ಹರಿಯಾಣ ಪ್ರತಿಭಾನ್ವಿತ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು.
58 ಕಿಲೋ ವಿಭಾಗದ ರಿಪಚೇಜ್ ಸ್ಪರ್ಧೆಯಲ್ಲಿ ಕಿರ್ಗಿಸ್ತಾನದ ಐಸುಲು ಟೈನಿಬೋಕೋವಾ ಅವರನ್ನು ಸಾಕ್ಷಿ 8-5 ಅಂಕಗಳಿಂದ ಸೋಲಿಸಿ ಕಂಚಿನ ಪದಕ ಜಯಿಸಿದರು.
ಸಾಕ್ಷಿ ಮಲಿಕ್ ಕ್ವಾರ್ಟರ್'ಫೈನಲ್'ನಲ್ಲಿ ರಷ್ಯಾದ ವಲೆರಿಯಾ ಕೊಬ್ಲೊವಾ ವಿರುದ್ಧ ಸೋಲುಂಡಾಗ ಭಾರತೀಯರಿಗೆ ಅತೀವ ನಿರಾಶೆಯಾಗಿತ್ತು. ಆದರೆ ಅದೃಷ್ಟವೆಂಬಂತೆ ರಷ್ಯಾದ ಸ್ಪರ್ಧಿ ಫೈನಲ್ ಪ್ರವೇಶಿಸಿದ್ದರಿಂದ ಸಾಕ್ಷಿಗೆ ರಿಪೆಚೇಜ್ ಮೂಲಕ ಕಂಚಿನ ಪದಕ ಗೆಲ್ಲುವ ಅವಕಾಶ ಲಭಿಸಿತು.

ರಿಪಚೇಜ್ ಅಂದರೇನು?
ರಿಪೆಚೇಜ್ ಅಂದರೆ ಫೈನಲ್ ತಲುಪಿದ ಸ್ಪರ್ಧಿಗಳ ವಿರುದ್ಧ  ಸೋತವರ ನಡುವೆ ಪಂದ್ಯಗಳು ನಡೆಯುತ್ತವೆ. ಅವರಿಗೆ ಕನಿಷ್ಠ ಕಂಚಿನ ಪದಕ ಗೆಲ್ಲುವ ಅವಕಾಶ ಕಲ್ಪಿಸಲಾಗುತ್ತದೆ. ಅದಕ್ಕಾಗಿ ಅವರು ಆಡುವ ಎರಡು ಪಂದ್ಯದಲ್ಲಿ ಗೆಲ್ಲಬೇಕು. ಸುಶೀಲ್ ಕುಮಾರ್ ಬೀಜಿಂಗ್ ಒಲಿಂಪಿಕ್ಸ್'ನಲ್ಲಿ ಇದೇ ರೀತಿ ರಿಪೆಚೇಜ್ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದರು.

ರೋಚಕ ಹಣಾಹಣಿ:
ಮೊದಲ ರಿಪೆಚೇಜ್ ಪಂದ್ಯವಾಡಿದ ಸಾಕ್ಷಿ ಮಂಗೋಲಿಯಾದ  ಓರ್ಕಾನ್ ಪುರ್ವೆಡೊರ್ಜ್ ವಿರುದ್ಧ  ಸೆಣಸಿದ್ರು. ಆರಂಭದಲ್ಲಿ ಹಿನ್ನಡೆ ಅನುಭವಿಸಿದ ಸಾಕ್ಷಿ ಅನಂತರ ತಮ್ಮ ಸ್ಕಿಲ್ ಶಕ್ತಿ ಪದರ್ಶಿಸುವ ಮೂಲಕ, ಸಾಕ್ಷಿ  12-3 ಅಂಕಗಳಿಂದ ಮೊದಲ ಪಂದ್ಯದಲ್ಲಿ ಅರ್ಹ ಜಯ ದಾಖಲಿಸಿದ್ರು..
ರಿಪೆಚೇಜ್' ಎರಡನೇ ಪಂದ್ಯದಲ್ಲಿ ಸಾಕ್ಷಿ  ಕೈರ್ಗಿಸ್ತಾನದ ಟೈನಿಬಿಕೋವಾ ವಿರುದ್ಧ ಸೆಣಸಿದ್ರು. ಮೊದಲ ಗೇಮ್ನಲ್ಲಿ ಸಾಕ್ಷಿ ಮಲಿಕ್ 5 ಅಂಕಗಳಿಂದ ಹಿನ್ನಡೆ ಅನುಭವಿಸಿದ್ರು.. ಅನಂತರ ಎರಡನೇ ಸೆಟ್ನಲ್ಲಿ ಚಾಣಾಕ್ಷ ಆಟವಾಡಿದ ಸಾಕ್ಷಿ  ಮಲಿಕ್, ಕೊನೆಯ ಕ್ಷಣದಲ್ಲಿ  8-5 ಅಂಕಗಳ ಅಂತರದಿಂದ, ಮುನ್ನಡೆ  ಕಾಯ್ದುಕೊಳ್ಳುವ ಮೂಲಕ ಗೆಲುವು ಪಡೆದ್ರು.
ಉತ್ತಮ ಆಟಪ್ರದರ್ಶಿಸಿದ ಸಾಕ್ಷಿ ಮಲಿಕ್  ಒಲಿಂಪಿಕ್ಸ್ನಲ್ಲಿ ಭಾರತದ ಪದಕದ ಖಾತೆ ತೆರೆಯುವಲ್ಲಿ ಸಫಲವಾದ್ರು. ಕಂಚಿನ ಪದಕ ಗೆದ್ದ ಸಾಕ್ಷಿ ಕುಣಿದು ಕುಪ್ಪಳಿಸಿದ್ರು..

ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ 4ನೇ ಮಹಿಳಾಪಟು:
ಒಲಿಂಪಿಕ್ಸ್'ನಲ್ಲಿ ಪದಕದ ಸಾಧನೆ ಮಾಡಿದ ಭಾರತದ ನಾಲ್ಕನೇ ಮಹಿಳೆ ಎಂಬ ಗೌರವಕ್ಕೆ ಸಾಕ್ಷಿ ಪಾತ್ರರಾದರು.

1) 2000 ನೇ ಇಸ್ವಿ ಸಿಡ್ನಿ ಒಲಿಂಪಿಕ್ಸ್' ವೈಟ್'ಲಿಫ್ಟಿಂಗ್'ನಲ್ಲಿ ಕರ್ಣಂ ಮಲ್ಲೇಶ್ವರಿ
2) 2012 ಲಂಡನ್ ಒಲಿಂಪಿಕ್ಸ್'ನಲ್ಲಿ ಮೇರಿ ಕೋಮ್
3) 2012 ಲಂಡನ್ ಒಲಿಂಪಿಕ್ಸ್'ನಲ್ಲಿ ಸೈನಾ ನೆಹ್ವಾಲ್ ಮುನ್ನ ಭಾರತದ ಪರ ಪದಕ ಸಾಧನೆ ಮಾಡಿದ ಮಹಿಳಾ ಅಥ್ಲೀಟ್ಗಳು.

ಪದಕ ಗೆದ್ದ  ಮೊದಲ ಮಹಿಳಾ ಕುಸ್ತಿಪಟು
ಒಲಿಂಪಿಕ್ಸ್'ನಲ್ಲಿ ಕುಸ್ತಿಯಲ್ಲಿ ಪದಕ ಗೆದ್ದಿರುವ ಮೊಟ್ಟಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಗೂ ಸಾಕ್ಷಿ ಮಲಿಕ್ ಪಾತ್ರವಾಗಿದ್ದಾರೆ. ಪದಕದ ಪೋಡಿಯಂ ಏರಿದ ನಾಲ್ಕನೇ ಮಹಿಳಾ ಕ್ರೀಡಾಪಟು ಎಂಬ ಗೌರವಕ್ಕೂ ಪಾತ್ರವಾಗಿದ್ದಾರೆ. ಅವರು ಪದಕ ಗೆಲ್ಲುತ್ತಿದ್ದಂತೆ ಎಲ್ಲೆಡೆಯಿಂದ ಶುಭಾಶಯಗಳು ಸುರಿಮಳೆ ಸುರಿಯುತ್ತಿದೆ.
ಕೃಪೆ:  SOMASHEKHAR BELLUBBI

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು