fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಜುಲೈ 23, 2017

ಮಾಸ್ತಿ ವೆಂಕಟೇಶ ಅಯ್ಯಂಗಾರ್

ಕನ್ನಡದ ಆಸ್ತಿ ಶ್ರೀನಿವಾಸ ಎಂಬ ಮಾಸ್ತಿ
ಕನ್ನಡ ಮನಸ್ಸುಗಳನ್ನು ಪೋಷಿಸಿಮಾನವನ ಅಂತಸ್ಥ ಶಕ್ತಿಯನ್ನು ಶೋಧಿಸಿದ ಸಂಸ್ಕೃತಿಯ ಪ್ರತಿಪಾದಕ
ಸಣ್ಣ ಕತೆಗಳ ಜನಕ ಎಂದೇ ಖ್ಯಾತರಾದ ಮಾಸ್ತಿಕನ್ನಡ ಸಾಹಿತ್ಯದಲ್ಲಿ ಕಥಾ ಪ್ರಕಾರಕ್ಕೆ ಹೊಸ ಆಯಾಮ ನೀಡಿದ ಮಾನವ ಅಂತಸ್ಥ ಜಗತ್ತಿನ ಶೋಧಕಇಂದು ಮಾಸ್ತಿ ಬಹುಕಿದ್ದಿದ್ದರೆ ಅವರಿಗೆ ೧೧೧ ವರ್ಷ ತುಂಬುತ್ತಿತ್ತು. ಇಂದು ಮಾಸ್ತಿ ನಮ್ಮ ಮುಂದಿಲ್ಲ ಆದರೆಅವರ ಬದುಕು- ಬರಹ ಚಿರಸ್ಥಾಯಿಯಾಗಿದೆ.

ಮಾಸ್ತಿ ಅವರು ಕೇವಲ ಕವಿಯಲ್ಲಸಂಸ್ಕೃತಿಯ ಪ್ರತಿಪಾದಕರೂ ಹೌದು. ಶಿಸ್ತುಬದ್ಧ ಜೀವನ ಎಂದರೇನು ಎಂಬುದನ್ನು ಮಾಸ್ತಿ ಅವರನ್ನು ನೋಡಿ ಕಲಿಯಬೇಕು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಿದ್ದರು. ನಿತ್ಯ ಮನೆಯಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ವಿಷ್ಣು ಸಹಸ್ರನಾಮ ಹೇಳದೆಮನೆ ಮಂದಿಯಿಂದ ಹೇಳಿಸದೇ ಅವರು ಹೊರ ಹೋಗುತ್ತಿರಲಿಲ್ಲ. ಹಾಗೆಂದ ಮಾತ್ರಕ್ಕೆ ಅವರು ಧರ್ಮಾಚರಣೆಯ ಮೂಲಕ ಸಂಸ್ಕೃತಿಯ ಪ್ರತಿಪಾದಕರಾಗಿ ನಿಲ್ಲಲಿಲ್ಲ. ಬದುಕಿನಲ್ಲಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಪರಿಪಕ್ವವಾಗುವುದು ಹೇಗೆ ಎಂಬುದನ್ನು ಮಾಸ್ತಿ ಅವರು ತಮ್ಮ ಕೃತಿಗಳ ಮೂಲಕ ಸಾರಿದರವರು. ತಮ್ಮಕಥೆಕಾದಂಬರಿಗಳ ಮೂಲಕ ತಮ್ಮ ಅನ್ವೇಷಣೆಗಳನ್ನು ಓದುಗರಿಗೆ ತಿಳಿಯ ಹೇಳಿದವರು.
ಮಾಸ್ತಿ ಅವರು ಮಾನವನ ಅಂತರಂಗದ ಅತೀತ ಮೂಲಗಳಲ್ಲಿ ಸಂಚರಿಸಿದ್ದರಿಂದಲೇ ಅವರ ಸಾಹಿತ್ಯ ಕಾಲದ ಪರಿಕಲ್ಪನೆಯಿಂದ ವೈಶಿಷ್ಟ್ಯಪೂರ್ಣವಾಗಿವೆ. ಮಾಸ್ತಿಯವರ ಸಾಹಿತ್ಯದಲ್ಲಿ ಅತ್ಯಂತ ರಹಸ್ಯವಾದ ಮುಷ್ಟಿಗ್ರಾಹ್ಯವಲ್ಲದ ನೆಲೆಯೆಂದರೆ ಮಾನವನೇ. ಮಾನವನ ಧಾರಣಾಶಕ್ತಿಅತೀಂದ್ರಿಯಾತ್ಮಕ ವಿಷಯಗಳನ್ನು ಅನಾಯಾಸವಾಗಿ ಬಣ್ಣಿಸಿರುವ ಮಾಸ್ತಿ ಅವರುಮನುಷ್ಯನಲ್ಲಿ ಅಂತಸ್ಥವಾಗಿರುವ ಶಕ್ತಿಯನ್ನು ಶೋಸಿದವರು.
ಅವರ ವೆಂಕಟರಾಯನ ಪಿಶಾಚವೆಂಕಶಾಮಿಯ ಪ್ರಣಯಸುಬ್ಬಣ್ಣಮಾತುಗಾರ ರಾಮಣ್ಣಗೌತಮಿ ಹೇಳಿದ ಕತೆಕಾಮನಹಬ್ಬದ ಕತೆಗಳೆಲ್ಲ ಈ ಅಂತಸ್ಥ ಶಕ್ತಿಯ ಪರಿಕಲ್ಪನೆಯನ್ನು ಅತ್ಯಂತ ನಾಜೂಕಿನಿಂದ ಬಣ್ಣಿಸುತ್ತವೆ.
ಕನ್ನಡ ಸಾರಸ್ವತ ಮಕುಟಕ್ಕೆ ಜ್ಞಾನಪೀಠದ ಮತ್ತೊಂದು ಗರಿತೊಡಿಸಿದ ಮಾಸ್ತಿ ಅವರನ್ನು ಇಂದಿನ ಪೀಳಿಗೆಯವರು ಪ್ರಾಸಮಯವಾಗಿ ಮಾಸ್ತಿ ಕನ್ನಡದ ಆಸ್ತಿ ಎಂದು ಸುಮ್ಮನಾಗುವುದುಂಟು. ಆದರೆಮಾಸ್ತಿ ಕನ್ನಡದ ಆಸ್ತಿ ಎನಿಸಿಕೊಂಡಿದ್ದುಕೇವಲ ಅವರ ಸಾಹಿತ್ಯ ಕೃಷಿಯಿಂದಲ್ಲ. ಕನ್ನಡ ಮನಸ್ಸುಗಳನ್ನು ಪೋಷಿಸಿ,ಮಾನವನ ಅಂತಸ್ಥ ಶಕ್ತಿಯನ್ನು ಶೋಸಿಪ್ರೋತ್ಸಾಹಿಸಿನೀರೆರೆದು ಬದುಕಿನ ಮಹತ್ವವನ್ನೂ ಕನ್ನಡದ ಅಸ್ತಿತ್ವದ ಹಿರಿಮೆಯನ್ನೂ ಸಾರಿದ್ದರಿಂದ.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜನಿಸಿದ್ದು ೧೮೯೧ರ ಜೂನ್೬ರಂದು. ಹುಟ್ಟೂರು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹೊಂಗೇನಹಳ್ಳಿ. ತಂದೆ ರಾಮಸ್ವಾಮಿ ಅಯ್ಯಂಗಾರ್ತಾಯಿ ತಿರುಮಲಮ್ಮ. ಸಂಪ್ರದಾಯಸ್ಥ ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಮಾಸ್ತಿಹೊಂಗೇನಳ್ಳಿ ಶಿವಾರಪಟ್ಟಣದ ಪುಟ್ಟ ಶಾಲೆಯಿಂದ ಸಿವಿಲ್ ಸರ್ವೀಸ್ ಪರೀಕ್ಷೆಯ ಪಾಸು ಮಾಡುವ ಎತ್ತರಕ್ಕೆ ಬಳೆದರು.
ವೆಂಕಟೇಶ ಅಯ್ಯಂಗಾರ್ ಶ್ರೀನಿವಾಸ ಎಂಬ ಕಾವ್ಯನಾಮದಿಂದ ಬರೆಯುತ್ತರಿದ್ದರಾದರೂ ಅವರಿಗೆ ಮಾಸ್ತಿ ಎಂಬ ಹೆಸರೇ ಸ್ಥಿರವಾಯ್ತು. ಅಪ್ರತಿಮ ವಾಗ್ಮಿಗಳೂ ಆಗಿದ್ದ ಮಾಸ್ತಿ ಮಾತಿನಲ್ಲಿ ಬಲು ಚತುರರು.
ವಾಕ್ಚತುರ : ಒಮ್ಮೆ ಯುವಕವಿಗೋಷ್ಠಿಯಲ್ಲಿ ಮಾಸ್ತಿ ಭಾಗವಹಿಸಿದ್ದರು. ಬಿಸಿರಕ್ತದ ತರುಣ ಕವಿಯೊಬ್ಬ ತನ್ನ ವೀರಾವೇಶದ ಭಾಷಣದಲ್ಲಿ ಈ ಮುದಿಕವಿಗಳು ಸಾಯುವ ತನಕ ಯುವಕವಿಗಳ ಬದುಕು ಹಸನಾಗದು ಎಂದನಂತೆ.
ಈ ಮಾತಿನಿಂದ ಮಾಸ್ತಿ ಸಿಟ್ಟಿಗೆದ್ದರೂಅದನ್ನು ತೋರ್‍ಪಡಿಸದೇ ತಮ್ಮ ಮಾತಿನಿಂದಲೇ ಛಡಿ ಏಟು ಕೊಟ್ಟರಂತೆ. ಆಗ ಅವರು ಹೇಳಿದ್ದು ಇಷ್ಟು: ಜಾಣ ಜಾಣ ಕಚ್ಚಾಡಿದ್ರೆ ಲೋಕಕ್ಕೆ ಒಳಿತಂತೆ (ಆಗ ವಿಚಾರ ವಿನಿಮಯವಾಗತ್ತೆ)ಕೋಣ ಕೋಣ ಕಚ್ಚಾಡಿದ್ರೆ ಲೋಕಕ್ಕೆ ಮೋಜಂತೆ (ಖರ್ಚಿಲ್ಲದೆ ಹೋಡೆದಾಟ ನೋಡಬಹುದು) ಆದರೆಜಾಣ - ಕೋಣ ಕಚ್ಚಾಡಿದ್ರೆ ಜನ ಜಾಣಂಗೆ ಉಗೀತಾರೆಅವನ ಹತ್ರ ಜಗಳ ಕಾಯ್ತೀಯಲ್ಲ ನಿನಗೆ ಬುದ್ಧಿ ಇಲ್ವ ಅಂತ.. ಹೀಗಾಗೇ ನಾನು ಆ ಬಿಸಿರಕ್ತದ ತರುಣನೊಂದಿಗೆ ಜಗಳ ಮಾಡಲ್ಲ ಅಂತ.
ಕಾರ್ಯಕ್ರಮದ ಕೊನೆಯಲ್ಲಿ ಆ ಯುವಕ ತನ್ನ ತಪ್ಪನ್ನು ಮನ್ನಿಸುವಂತೆ ಮಾಸ್ತಿ ಅವರ ಕಾಲಿಗೆ ಬಿದ್ದನಂತೆ. ಮತ್ತೊಂದು ಸಂದರ್ಭ: ಮಾಸ್ತಿಯವರಿಗಿಂತ ಕಿರಿಯರಿಗೆಲ್ಲಾ ಜ್ಞಾನಪೀಠ ಬಂದ ಬಳಿಕ ಮಾಸ್ತಿ ಅವರಿಗೆ ಆ ಗೌರವ ದೊರಕಿತು. ಪತ್ರಕರ್ತರೊಬ್ಬರು ಮಾಸ್ತಿ ಅವರನ್ನು ಕೇಳಿದರಂತೆ ನಿಮಗಿಂತ ಕಿರಿಯರಿಗೆಲ್ಲಾ ಪ್ರಶಸ್ತಿ ಬಂದ ಬಳಿಕ ನಿಮಗೆ ಜ್ಞಾನಪೀಠ ದೊರೆತಿದೆ ಇದರಿಂದ ನಿಮಗೆ ಬೇಸರ ಆಗಿಲ್ಲವೇಮಾಸ್ತಿ ಅಷ್ಟೇ ನಾಜೂಕಾಗಿ ಉತ್ತರಿಸಿದರಂತೆ.
ಮನೆಯಲ್ಲಿ ಏನಾದರೂ ಸಿಹಿತಿಂಡಿ ಮಾಡಿದ್ರೆ ಮೊದಲು ಕೊಡೋದೇ ಚಿಕ್ಕೋರಿಗೆಅವರೆಲ್ಲಾ ಸಂತೋಷ ಪಟ್ಟಮೇಲೆ ಉಳಿದ್ರೆ ಹಿರಿಯರು ತಿಂತಾರೆ... ಇಲ್ಲೂ ಅಷ್ಟೇ ಎಂದು ಸುಮ್ಮನಾದರಂತೆ. ಒಮ್ಮೆ ಗಾಂಬಜಾರ್‌ನಲ್ಲಿ ಮಾಸ್ತಿ ಸಂಜೆ ಕೊಡೆ ಹಿಡಿದು ವಾಕಿಂಗ್ ಹೊರಟಿದ್ರು.. ಕೆಲವು ಹುಡುಗರು .. ಮಳೆಯೂ ಇಲ್ಲ ಬಿಸಿಲು ಮೊದ್ಲೇ ಇಲ್ಲ. ಅಲ್ಪನಿಗೆ ಐಶ್ವರ್‍ಯ ಬಂದ್ರೆ ಅರ್ಧರಾತ್ರೀಲಿ ಕೊಡೆ ಹಿಡಿದ ಅನ್ನೋಹಾಗೆ ಮಾಸ್ತಿ ಕೊಡೆ ಹಿಡಿದು ನಡೀತಿದ್ದಾರೆ ಎಂದು ಛೇಡಿಸಿದರಂತೆ. ಇದನ್ನು ಕೇಳಿಸಿಕೊಂಡ ಮಾಸ್ತಿ ಎಳ್ಳಷ್ಟೂ ಕೋಪಗೊಳ್ಳದೆ. ಆ ಹುಡುಗರನ್ನು ಕರೆದು ತಮ್ಮೊಂದಿಗೆ ವಾಕಿಂಗ್‌ಗೆ ಕರೆದುಕೊಂಡು ಹೋದರಂತೆ.
ಇಕ್ಕೆಲೆಗಳಲ್ಲೂ ದೊಡ್ಡ ದೊಡ್ಡ ಮರಗಳಿದ್ದ ಗಾಂ ಬಜಾರ್‌ನಲ್ಲಿ ಆ ಹುಡಗರ ಮೇಲೆ ಹಕ್ಕಿ ಪಕ್ಷಿಗಳ ಹಿಕ್ಕೆ ಬಿತ್ತಂತೆ. ಆಗ ಮಾಸ್ತಿ ಹೇಳಿದ್ರು... ಈಗ ಗೊತ್ತಾಯ್ತಾ ಈ ಅಲ್ಪ ಯಾಕೆ ಕೊಡೆ ಹಿಡಿದು ನಡೀತಿದ್ದ ಅಂತ...
ಮಾಸ್ತಿ ಅವರ ಬದುಕಲ್ಲಿ ಇಂತ ಘಟನೆಗಳು ಹಲವು. ಇಂಗ್ಲಿಷ್ ಉಪನ್ಯಾಸಕರಾಗಿಅಸಿಸ್ಟೆಂಟ್ ಕಮಿಷನರ್ ಆಗಿ ಸೇವೆ ಸಲ್ಲಿಸಿ ರಾಜಸೇವಾ ಪ್ರಸಕ್ತ ಎಂಬ ಬಿರುದನ್ನೂ ಪಡೆದ ಮಾಸ್ತಿ ಜನಸಾಮಾನ್ಯರಿಗೂ ಸರಕಾರದ ಕಾನೂನು-ಕಟ್ಟಳೆಗಳ ಬಗ್ಗೆ ಅರಿವಿರಬೇಕು. ಆ ಎಲ್ಲ ನಿಯಮಗಳೂ ಕನ್ನಡದಲ್ಲಿರಬೇಕು ಎಂದು ಪ್ರತಿಪಾದಿಸಿದವರು. ಆಡಳಿತದಲ್ಲಿ ಕನ್ನಡ ಜಾರಿಗೊಳಿಸಲು ಮಾಸ್ತಿ ಅಂದೇ ಶ್ರಮಿಸಿ ಕನ್ನಡದ ಆಸ್ತಿಯಾದವರು.
ಹಲವು ಕಥೆನಾಟಕಆತ್ಮಕಥನಭಾಷಾಂತರಖಂಡಕಾವ್ಯಕವನ ಸಂಕಲನಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿರುವ ಮಾಸ್ತಿ ಅವರಿಗೆ ಜ್ಞಾನಪೀಠದ ಗರಿದೊರೆತದ್ದು ೧೯೮೩ರಲ್ಲಿ (ಚಿಕವೀರರಾಜೇಂದ್ರ). ಮಾಸ್ತಿ ಅವರದು ವಿಮರ್ಶೆಯಲ್ಲೂ ಪಳಗಿದ ಕೈ. ಅವರ ವಿಮರ್ಶೆಗಳು ಸುಂದರಶೈಲಿಗಾಂಭೀರ್‍ಯಪೂರ್ಣ ನವಚೈತನ್ಯದಿಂದ ವಿಶಿಷ್ಟವಾಗಿವೆ. ಭಾರತತೀರ್ಥಆದಿಕವಿ ವಾಲ್ಮೀಕಿಗಳಲ್ಲಿ ಅವರ ವಿದ್ವತ್ತು ಮತ್ತು ವಿಚಾರಲಹರಿಯ ಪರಿಚಯವಾಗುತ್ತದೆ. ಮಾಸ್ತಿಯವರ ಕೆಲವು ಕೃತಿಗಳು:
ನಾಟಕ : ಯಶೋಧರಕಾಳಿದಾಸಕಾಕನಕೋಟೆಶಿವಾಜಿತಿರುಪಾಣಿತಾಳಿಕೋಟೆಪುರಂದರದಾಸಭಟ್ಟರ ಮಗಳು. (ಇದಲ್ಲದೆ ಶೇಕ್ಸ್‌ಪಿಯರ್ಠಾಕೂರರ ಹಲವು ನಾಟಕಗಳನ್ನೂ ಮಾಸ್ತಿ ಕನ್ನಡಕ್ಕೆ ತಂದಿದ್ದಾರೆ)
ಕಾದಂಬರಿಗಳು: ಚೆನ್ನಬಸವನಾಯಕಚಿಕ್ಕವೀರರಾಜೇಂದ್ರಸುಬ್ಬಣ್ಣ
ಖಂಡಕಾವ್ಯ: ಶ್ರೀರಾಮಪಟ್ಟಾಭಿಷೇಕ
ಆತ್ಮಚರಿತ್ರೆ: ಭಾವ
ಜೀನವಚರಿತ್ರೆ: ರಾಮಕೃಷ್ಣ ಪರಮಹಂಸಠಾಕೂರರ ಜೀವನ ಚರಿತ್ರೆ
                                                                                         ಕೃಪೆ =>> ಟಿ.ಎಂ.ಸತೀಶ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು