fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ಫೆಬ್ರವರಿ 22, 2018

ಅಮ್ಮಾ… ನಿನಗೆ ಕೋಟಿ ಕೋಟಿ ವಂದನೆ (Millian thanks to Mother)

                   ಮಮಕಾರದ ಅಕ್ಷಯ ನಿಧಿಯೇ
                  
ನಿನಗೆ ಕೋಟಿ ವಂದನೆ..!
                  
ಸ್ನೇಹದ ಮೂರ್ತ ರೂಪವೇ
                  
ನಿನಗೆ ಕೋಟಿ ವಂದನೆ..!
                  ನಡು ರಾತ್ರಿಯಲು ನನ್ನ ಅಳುವಿಗೆ
                  
ಎದೆ ಹಾಲಿನ ಸಾಂತ್ವನ ನೀಡಿ..
                  
ನನ್ನ ಹಟಕ್ಕೆಲ್ಲ ತಲೆಬಾಗಿ ನಿಂತು..
                  
ಅತ್ತಾಗ ಕಣ್ಣೊರೆಸಿ , ನಕ್ಕಾಗ ಕಣ್ಣರಳಿಸಿ..
                  
ಪ್ರೀತಿಯ ಮಳೆ ಸುರಿಸಿ, ಗೆಲುವಿನ ದಾರಿ ತೋರಿಸಿ
                  
ಬೆಳೆಸಿದಳು ನನ್ನ ತಾಯಿ
                  
ಜನನೀ.. ನಿನಗೆ ಕೋಟಿ ವಂದನೆ…!
                  ತೆವಳಿ ಬರಲು ಕೈ ನೀಡಿಡಳು..
                  
ತೊದಲು ನುಡಿಯಲು ತಿದ್ದಿ ಹೇಳಿದಳು..
                  
ಚಂದ ಮಾಮನ ತೋರಿಸಿ ತುತ್ತು ಕೊಟ್ಟು
                  
ಹಸಿವ ನೀಗಿಸಿದಳು..
                  
ತನ್ನ ಬಸಿರೊಳಗೂ ನನಗೆ ಉಸಿರಾದಳು..
                  
ದಿವ್ಯ ಚೇತನವೇ.. ನಿನಗೆ ಕೋಟಿ ವಂದನೆ..!
                  ತನ್ನ ಬೇಸರವ ಮರೆತು ನನಗೆ
                  
ಸಾಂತ್ವನವಾದಳು..
                  
ನನ್ನ ಸಂತೋಷದಲಿ ನಗೆಯ ಕಂಡಳು..
                  
ಗೆಲುವಿಗೆ ಸ್ಪೂರ್ತಿಯಾದಳು
                  
ಬದುಕಿದೆ ದಾರಿದೀಪವಾದಳು..
                  
ಸ್ಪೂರ್ತಿಯ ಚಿಲುಮೆಯೇ.. ನಿನಗೆ ಕೋಟಿ ವಂದನೆ..!
                  ಪದಗಳು ಸಾಕಾಗದು ನಿನ್ನ ಬಣ್ಣಿಸಲು..
                  
ಜನ್ಮವು ಸಾಕಾಗದು ನಿನ್ನ ಋಣವ ತೀರಿಸಲು..
                  
ನವಮಾಸ ನೀ ಹೊತ್ತ ಜೀವ
                  
ನಿನಗಷ್ಟೇ ಮೀಸಲು..
                  
ಹೊತ್ತು ಹೆತ್ತ ಹೆತ್ತವಳು ನೀನು.
                  
ನನ್ನ ಉಸಿರಿನ ಒಡತಿ ನೀನು.. .
                  
ಅಮ್ಮಾನಿನಗೆ ಕೋಟಿ ಕೋಟಿ ವಂದನೆ….!

                                                                 ಕೃಪೆ -> Hussain

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು